ಮೋಡಗಳ ಮೇಲೆ, ನನ್ನ ಕನಸುಗಳಾಚೆ: ನನ್ನ ಮೊದಲ ವಿಮಾನ ಪ್ರಯಾಣ
ವರ್ಷಗಳ ಹಿಂದೆ ನಾನು ನನ್ನ ಊರಿನಲ್ಲಿ ನಿಂತು ಆಕಾಶದ ಮೂಲಕ ಹಾರುವ ವಿಮಾನಗಳನ್ನು ನೋಡುತ್ತಿದ್ದೆ. “ಒಂದು ದಿನ ನಾನು ಕೂಡ ಅದರಲ್ಲಿ ಪ್ರಯಾಣ ಮಾಡುತ್ತೇನೆ” ಎಂಬ ಮೌನ ಕನಸು ನನ್ನೊಳಗೆ ಇತ್ತು. ಕೊನೆಗೂ, ಆ ಕನಸು ನನಸಾದ ದಿನ ನನ್ನ ಜೀವನದ ಮರೆಯಲಾಗದ ಕ್ಷಣವಾಯಿತು.
ಕೆಲವು ತಿಂಗಳ ಹಿಂದೆ ನಮ್ಮ CEO ಗೋವಾಗೆ ಹೋಗುವ ಬಗ್ಗೆ ಹೇಳಿದ್ದರು. ನಾನು ನಗುಮುಖದಿಂದ ತಲೆ ಆಡಿಸಿದೆ, ಆದರೆ ಒಳಗೆ “ನೋಡೋನಾ ಏನಾಗುತ್ತದೆ” ಎಂದುಕೊಂಡೆ. ಅದಕ್ಕೂ ಮೊದಲು ನನ್ನ ವಿಯೆಟ್ನಾಂ ಪ್ರಯಾಣ ಯೋಜನೆ ಅಮ್ಮ ಅಸ್ವಸ್ಥರಾಗಿದ್ದ ಕಾರಣ ರದ್ದು ಆಗಿತ್ತು. ಆ ಅನುಭವ ನನಗೆ ಬೇಗ ಸಂತೋಷಪಡುವುದನ್ನು ತಪ್ಪಿಸಿತು.ಆದರೂ ನನ್ನ ಮನಸ್ಸಿನ ಒಳಗೆ ಈ ಕನಸನ್ನು ನಿಜವಾಗುತ್ತದೆ ಎಂದು ಭಾವಿಸುತ್ತಲೇ ಇದ್ದೆ. ಪ್ರತೀ ಬಾರಿ ನಮ್ಮ ಊರಿನ ಮೇಲೆ ವಿಮಾನ ಹಾರಿದಾಗ, ನಾನು ಮೇಲಕ್ಕೆ ನೋಡಿ ನನ್ನನ್ನು ಅದರಲ್ಲಿ ಕುಳಿತಿರುವಂತೆ ಕಲ್ಪಿಸಿಕೊಳ್ಳುತ್ತಿದ್ದೆ.
ಮತ್ತೆ ಅಧಿಕೃತವಾಗಿ “ಫೆಬ್ರವರಿಯಲ್ಲಿ ನಾವು ಗೋವಾಕ್ಕೆ ಹೋಗುತ್ತಿದ್ದೇವೆ, ಶಾಪಿಂಗ್ ಪ್ರಾರಂಭಿಸಿ” ಎಂದು ಘೋಷಣೆ ಬಂದಾಗ ನನ್ನ ಹೃದಯವೇ ಮೊದಲು ಹಾರಿದಂತೆ ಅನಿಸಿತು. ಸಂತೋಷದ ಜೊತೆಗೆ ನನ್ನ ತಾಯ್ತಂದೆಯ ಆರೋಗ್ಯದ ಬಗ್ಗೆ ಸ್ವಲ್ಪ ಚಿಂತೆಯೂ ಇತ್ತು. ಪ್ರತೀ ಅಪ್‌ಡೇಟ್ ಬಂದಾಗ ನನ್ನ ಉತ್ಸಾಹ ಇನ್ನಷ್ಟು ಹೆಚ್ಚುತ್ತಿತ್ತು.
ಪ್ರಯಾಣದ ಹಿಂದಿನ ರಾತ್ರಿ ನನಗೆ ಸರಿಯಾಗಿ ನಿದ್ರೆ ಬರಲಿಲ್ಲ. ಸಮಯವನ್ನು ಮರುಮರು ನೋಡುತ್ತಾ ಸ್ವಲ್ಪ ಸ್ವಲ್ಪ ಹೊತ್ತು ನಿದ್ರೆ ಮಾಡಿ, ಬೆಳಿಗ್ಗೆ ಸ್ವಲ್ಪ ದಣಿದಿದ್ದರೂ ತುಂಬಾ ಉತ್ಸಾಹದಿಂದ ಎದ್ದೆ. ವಿಮಾನದ ಮುಂದೆ ಫೋಟೋ ತೆಗೆದುಕೊಳ್ಳಬೇಕು ಎಂಬುದು ನನ್ನ ದೊಡ್ಡ ಆಸೆ ಆಗಿತ್ತು, ಆ ನೆನಪನ್ನು ಸದಾ ಉಳಿಸಿಕೊಳ್ಳಲು ಯೋಚಿಸುತ್ತಿದ್ದೆ.
ನಾವು ಏರ್‌ಪೋರ್ಟ್ ತಲುಪಿದಾಗ ಅದು ಸಿನಿಮಾಗಳಲ್ಲಿ ಕಾಣುವಂತೆ ಕಾಣಿಸಿತು; ಆದರೆ ಈ ಬಾರಿ ನಾನು ಆ ದೃಶ್ಯದ ಭಾಗವಾಗಿದ್ದೆ. ಚೆಕ್-ಇನ್ ಮಾಡಿ, ಸುರಕ್ಷತಾ ತಪಾಸಣೆ ಮುಗಿಸಿ, ಬೋರ್ಡಿಂಗ್ ಪಾಸ್ ಜೊತೆ ಫೋಟೋ ತೆಗೆದುಕೊಂಡು, ಮಕ್ಕಳು ಸಂತೋಷದಿಂದ ಸುತ್ತಾಡುವಂತೆ ನಾವು ಏರ್‌ಪೋರ್ಟ್ ಅನ್ನು ಅನ್ವೇಷಿಸಿದೆವು.
ವಿಮಾನಕ್ಕೆ ಕಾಲಿಟ್ಟ ಕ್ಷಣ ನನಗೆ ಪವಿತ್ರ ಅನುಭವದಂತಿತ್ತು. ಬಲ ಕಾಲಿನಿಂದ ಒಳಗೆ ಹೆಜ್ಜೆ ಇಟ್ಟೆ. ಏರ್ ಹೋಸ್ಟೆಸ್ ನಗುತ್ತ ಸ್ವಾಗತಿಸಿದರು, ಆದರೆ ನನ್ನ ಕಣ್ಣುಗಳು ವಿಮಾನದ ಒಳಭಾಗವನ್ನು ಆಶ್ಚರ್ಯದಿಂದ ನೋಡುತ್ತಲೇ ಇದ್ದವು. ಆರಂಭದಲ್ಲಿ ನನಗೆ ಕಿಟಕಿ ಸೀಟ್ ಸಿಗಲಿಲ್ಲ, ಆದರೆ ಒಬ್ಬ ಸಹೋದ್ಯೋಗಿಯ ಸಹಾಯದಿಂದ ನಂತರ ಕಿಟಕಿ ಸೀಟ್‌ನಲ್ಲಿ ಕುಳಿತುಕೊಳ್ಳುವ ಅವಕಾಶ ಸಿಕ್ಕಿತು; ಅದಕ್ಕೆ ನಾನು ತುಂಬಾ ಕೃತಜ್ಞತೆಯಿಂದ ತುಂಬಿಕೊಂಡೆ.
ಟೇಕ್‌ಆಫ್ ಮೊದಲು ನಾನು ನನ್ನ ಮನೆಯವರೊಂದಿಗೆ ವಿಡಿಯೋ ಕಾಲ್ ಮಾಡಿದೆ. ನನ್ನ ಅಮ್ಮ ಹೆಚ್ಚು ಮಾತಾಡಲಿಲ್ಲ, ಆದರೆ ಅವರ ಹೆಮ್ಮೆಯ ನಗು ಎಲ್ಲವನ್ನೂ ಹೇಳಿತು. ನನ್ನ ಸಹೋದ್ಯೋಗಿ ವಿಭು ನನ್ನ ಇನ್-ಫ್ಲೈಟ್ ಗೈಡ್ ಆಗಿ, turbulence ಮತ್ತು ಮೋಡಗಳ ಬಗ್ಗೆ ನನ್ನ ಎಲ್ಲಾ “ಸಿನಿಮಾ ಪ್ರಶ್ನೆಗಳಿಗೆ” ಸಹನದಿಂದ ಉತ್ತರಿಸಿ ನನ್ನ ಭಯವನ್ನು ನಗುವಾಗಿ ಮೂಡಿಸಿದರು.
ವಿಮಾನ ಮೇಲಕ್ಕೆ ಹಾರಿದ ಕ್ಷಣದಲ್ಲಿ ನನ್ನ ಎಲ್ಲಾ ಚಿಂತೆಗಳು ಕಣ್ಮರೆಯಾದವು. ಹತ್ತಿಯಂತಿರುವ ಮೋಡಗಳು, ಕೆಳಗೆ ಕಾಣುವ ಸಣ್ಣ ಮನೆಗಳು, ಅನಂತವಾದ ನೀಲಿ ಆಕಾಶ, ಎಲ್ಲವೂ ಕನಸಿನಂತಿತ್ತು. ಪ್ರಯಾಣ ಬೇಗ ಮುಗಿದರೂ ಆ ನೆನಪು ನನ್ನ ಹೃದಯದಲ್ಲಿ ಸದಾ ಉಳಿಯಿತು. ವಿಮಾನದಿಂದ ಇಳಿದ ನಂತರ ಒಬ್ಬ ಸಹೋದ್ಯೋಗಿ ನನ್ನ ಫೋಟೋ ತೆಗೆದರು. ನಾನು ನಗುತ್ತ ನಿಂತು, “ಹೌದು, ನಾನು ಕೊನೆಗೂ ಹಾರಿದೆ, ನನ್ನ ಮೊದಲ ವಿಮಾನ ಪ್ರಯಾಣ” ಎಂದು ಮನಸ್ಸಿನಲ್ಲಿ ಹೇಳಿಕೊಂಡೆ.
ಆ ದಿನ ನನಗೆ ಒಂದು ಸುಂದರ ಪಾಠ ಕಲಿಸಿತು: ಕೆಲವು ಕನಸುಗಳು ನಮ್ಮ ಸಮಯಕ್ಕೆ ಬರದೇ ಇರಬಹುದು, ಆದರೆ ಅವು ಬಂದಾಗ ಸಂಪೂರ್ಣವಾಗಿ ಹಾರುತ್ತವೆ.
ರಕ್ಷಿತ ಬಿ. ಎನ್
English translation:
Above the Clouds, Beyond My Dreams: My First Flight Journey.
Years ago, in a small hometown filled with simple dreams, I would often pause to watch airplanes glide across the vast blue sky. To others, it may have been an ordinary sight. But to me, it carried a quiet promise. “One day, I will travel in one of those planes,” I would tell myself silently. Finally, the day that dream came true became an unforgettable moment in my life.
A few months ago, our CEO announced a Goa retreat by flight. I smiled, nodded, and quietly thought, “Let’s see what happens.” Earlier, my Vietnam travel plan had been cancelled when my mother fell ill, and that experience taught me not to celebrate too early. Still, somewhere deep inside, I began manifesting. Every time I heard a plane fly over my hometown, I looked up and imagined myself inside it.
When the official announcement came again “We’re going to Goa in February. Start shopping!” my heart took off before I did. Excitement came with silent prayers and a little fear about my parents’ health. When the retreat committee was formed, I trusted instantly. With every update, my excitement grew wings.
The night before travel, I was so nervous that I couldn’t sleep properly the night before. I went to bed at 11 p.m., kept checking the time, slept for short intervals, and woke up again early morning feeling both sleepy and excited. Even though I was tired, I was determined to take photos in front of the airplane, a memory I wanted to keep forever. Somehow, we reached the airport, and it looked exactly like the movies, only this time, I was inside the scene. We checked in, completed security checks, took photos with our boarding passes, and walked around the airport exploring everything like excited children. Boarding the flight felt sacred. I stepped in with my right foot, the air hostess greeted me with a warm smile, but my eyes were busy looking around the plane in amazement.
I didn’t get a window seat at first, but a colleague’s kindness fixed that, I quickly moved to the window seat, feeling incredibly grateful. Before takeoff, I video-called my family. My mother said nothing, but her proud smile said everything. My colleague Vibu became my in-flight guide. I asked all my “movie-inspired” questions, and she patiently explained turbulence and clouds, turning fear into laughter.
As the plane lifted, all worries disappeared. Cotton-like clouds, tiny houses below, endless blue, it felt unreal. The journey ended too soon, but the memory landed forever in my heart. When we landed smoothly and stepped out of the aircraft, one of my colleagues took my photo. I stood there smiling, thinking, “Yes, I finally did it. I flew for the first time.” That day taught me something beautiful: Some dreams don’t follow our timeline, but when they arrive, they fly perfectly.
~ Rakshita B.N